ಓಂ ಜೈ ಗೋಮಾತಾ ಅಂಬೆ ಜೈ ಜೈ ಗೋಮಾತಾ(ಪ)
ಆರತಿ ಗೈಯುತ ಪೂಜಿಪೆವು/
ಹಸುರಿನ ಹುಲ್ಲನು ನೀಡುವೆವು,,,
ಅಂಬಾ ಎಂಬಾ ಒಲವಕರೆ/
ತುಂಬಾ ಪ್ರೀತಿಯ ಮಮತೆ ಕರೆ,,1
ಸಾಗರ ಮಥನದಿ ಜನಿಸಿರಲು
ಬ್ರಹ್ಮನೆ ಭೂಮಿಗೆ ಕಳಿಸಿರಲು
ವಸುವಿನ ಮಗಳೆ ರುದ್ರರ ತಾಯೆ
ಆದಿ ಆದಿತ್ಯರ ಸಹೋದರಿಯೆ,,,2
ರಾಜ ದಿಲೀಪರ ಗೋ ಪೂಜೆ
ಸರ್ವಾಭಿಷ್ಠವು ಸಿದ್ಧಿಸಿರೆ
ಸೂರ್ಯವಂಶದಲಿ ದಶರಥಗೆ
ಸುತ ಶ್ರೀರಾಮನದಾಗಮನ,,, 3
ಗೋವು ಮನೆಲಿರೆ ಸಂಪದವು
ಗೋಪೂಜೆಯಲಿ ಸುಖ ಫಲವು
ಮಾತೆಯ ಸ್ಥಾನದಿ ಹಾಲೀವ
ಮಮತೆಯ ಸರಳೆಗೆ ವಂದಿಸುವ,, 4
ಉಸಿರಿನ ಮೂಲವನೀವಾಕೆ
ಹಸುರನು ಮೋದದಿ ಮೇವಾಕೆ
ಹೂ ಫಲ ಬೆಳೆಗಳು ಮಾತೆದಯಾ
ಬುವಿ ಪರಿಶುದ್ಧತೆ ಮಾತೆಕೃಪಾ,, 5
ಪಂಚಗವ್ಯವು ಪವಿತ್ರ ವರ
ಪಂಚಾಮೃತವದು ಪುಣ್ಯಕರ
ದೇಶೀ ಹಾಲಿನ ಗುಣವಂತೆ
ಮೋಕ್ಷದ ಹಾದಿಗೆ ವರದಾತೆ,,, 6
ಗೋವಿರೆ ಮನೆಯಲಿ ಆರೋಗ್ಯ
ಪೂಜಾ ವಿಧಿಗಳ ಸಾಯುಜ್ಯ
ವೈತರಣೀ ನದಿ ದಾಟಲಿಕೆ
ಮುಕ್ತಿದಾಯಿ ಜಯ ಗೋಮಾತೆ,, 7
ಕೃಷ್ಣನ ಕೊಳಲಿನ ದನಿ ಪ್ರೀತೆ
ವಿಷ್ಣು ಪೂಜಿತ ಕಾಮದುಘೇ
ಭಾರತ ಭೂಮಿಯ ಸಂಜಾತೆ
ವಿಶ್ವವಂದ್ಯಳೆ ಜೈ ಗೋಮಾತೆ,,, 8